ಇದೀಗ "ತುಮ್ಹಾರೆ ಚಾಹನೆವಾಲಾ ಖುದಾ ಕೆ ದುನಿಯಾ ಮೆ"
ಈ ಹಾಡಿನ ಅನುವಾದವನ್ನು ಪೂರ್ತಿಗೊಳಿಸಿದ್ದೇನೆ. ( ನಾನು ಕೊಟ್ಟ ಸಂಖ್ಯೆ 106)
ಅದು ಇಲ್ಲಿದೆ ನೋಡಿ.
ನಿನ್ನನ್ನು ಬಯಸುವ ಮನುಜ
ಆ ದೇವನಾ ಸೃಷ್ಟಿಯಲಿ
ಬೇರಾರು ಇರದಿರಲಿ
ಈ ನನ್ನ ಹೊರತು || ಪ||
ಈ ವಿಷಯ ಹೇಗೆ ಸಹಿಸೀತು ನನ ಹೃದಯ
ಬೇರೊಂದು ತುಟಿಯಲ್ಲಿ ನಿನ್ನಯ ಹೆಸರು
ನಿನ್ನಯ ಚೆಲುವ ಕನ್ನಡಿ ಕೂಡ ಹೊಗಳೆ
ಅದ ಒಡೆದು ಹಾಕುವೆನು ಇದನುನೀ ಕೇಳು
ನಿನ್ನಯ ಪ್ರೇಮಕೆ ನಾ ಮರುಳು ಹೀಗೆ
ಬೇರಾರು ಇರದಿರಲಿ
ಈ ನನ್ನ ಹೊರತು
ನಿನ್ನನ್ನು ಬಯಸುವ ಮನುಜ
ಆ ದೇವನಾ ಸೃಷ್ಟಿಯಲಿ ||೧||
ಆ ದಿನವು ಬರದಿರಲಿ ತಾನೆಂದಿಗೂ
ನನ್ನಿಂದ ನೀ ಆಗಿ ದೂರ
ಬೇರೊಬ್ಬರ ಪ್ರಣಯಕ್ಕೆ ನೀ ಕಾತುರವಾಗಿ
ಬೇರೊಬ್ಬರ ಹೆಗಲಲಿ ನೀ ತಲೆಯ ಇರಿಸಿ
ನೀ ನಿನ್ನ ದುಃಖಕೆ ಆಸರೆಯ ಹುಡುಕುವುದು
ನಿನ್ನ ದುಃಖಕ್ಕೆ ಹತ್ತಿರ ಯಾವ ದಿನವೂ
ಬೇರಾರು ಇರದಿರಲಿ
ಈ ನನ್ನ ಹೊರತು
ನಿನ್ನನ್ನು ಬಯಸುವ ಮನುಜ
ಆ ದೇವನಾ ಸೃಷ್ಟಿಯಲಿ|| ೨||
ನಿನ್ನ ಹೃದಯಕ್ಕೆ ನನ್ನಿಂದ ಆಗದು ಗಾಯ
ಹೀಗಾಗದು ಎಂದು ನನ್ನ ಬಲವಾದ ನಂಬಿಕೆ
ನನ ಪ್ರೀತಿಯಲ್ಲಿ ನಂಗೆ ಬಲು ನಂಬಿಕೆ
ನಿನ್ನ ಪ್ರೀತಿನೇ ನಿನ್ನ ಮೋಸ ಮಾಡದೇ ಇರಲಿ
ಬೇಡಿಕೆ ಒಂದೇ ನಿನ್ನ ದೇವರ ಲೋಕದಲಿ
ಬೇರಾರು ಇರದಿರಲಿ
ಈ ನನ್ನ ಹೊರತು
ನಿನ್ನನ್ನು ಬಯಸುವ ಮನುಜ
ಆ ದೇವನಾ ಸೃಷ್ಟಿಯಲಿ || ೩||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!